Wednesday, February 9, 2011

ಬಾರಿಸು ಕನ್ನಡ ಡಿಂಡಿಮ – ಮಾಡು ಶಂಖನಾದ - ೭೭ನೆ ಕನ್ನಡ ಸಾಹಿತ್ಯ ಸಮ್ಮೇಳನ


೭೭ನೆ ಕನ್ನಡ ಸಾಹಿತ್ಯ ಸಮ್ಮೇಳನ

ಇದು ನಾಲ್ಕು ದಶಕಗಳನಂತರ ಬೆಂಗಳೂರುನಲ್ಲಿ ಜರುಗಿರುವ ಅತ್ತ್ಯುತ್ತಮ ಕಾರ್ಯಕ್ರಮ.

ಇಲ್ಲಿನ ಜನ ಮರುಳೋ ಜಾತ್ರೆ ಮರುಳೋ ಎನ್ನುವ ನಾಣ್ಣುಡಿಯನ್ನೂ ತಪ್ಪು ಎಂದು ಹೇಳುವ ಒಂದು ಪ್ರಯತ್ನದಂತೆ ಕಂಡಿತು.  ಸುಮ್ಮನೆ ಸಮಯ ಕಳೆಯಲು ಬಂದಂತೆ ಜನರು ಇರಲಿಲ್ಲ.  ಎಲ್ಲರ ಮನದಲ್ಲೂ ಇದು ನಮ್ಮ ಮನೆಯ ಹಬ್ಬ ಅನ್ನುವ ಸಂಭ್ರಮ, ನಮ್ಮ ಭಾಷೆ ಯಾವದಕ್ಕೂ ಕಮ್ಮಿ ಇಲ್ಲ ಎಂದು ತೋರಿಸುವ ತವಕ ಕಾಣುತಿತ್ತು. 


ಗೋಷ್ಠಿಯಲ್ಲಿ ನೆರೆದಿದ್ದ ಜನರು, ಹಾಸ್ಯ ಸಂಭ್ರಮದಲ್ಲಿ ಮುಳುಗೆದ್ದರು  ಸಭಿಕರು, ಪುಸ್ತಕ ಪ್ರದರ್ಶನದಲ್ಲಿ ಜನ ಜಂಗುಳಿ ಇದ್ದರು ಕೂಡ, ಯಾರು ಸಿಟ್ಟು ಸೆಡುವು ತೋರಿಸದೆ, ಎಲ್ಲರು ಎಲ್ಲರಿಗು ಅವಕಾಶ ಕೊಡುತ್ತ ಇದ್ದರು. ಪುಸ್ತಕಗಳನ್ನು ಕೊಂಡವರು ಖುಶಿ ಪಡುತ್ತ ಹೋದರು. ಪುಸ್ತಕಗಳ ಭಂಡಾರವನ್ನೂ ನೋಡಿದ್ದ ಜನತೆ ಅಚ್ಹರಿಪಡುತ್ತ ಕೊಳ್ಳುವ ಪುಸ್ತಗಳ ಪತ್ತಿಮದಿಕೊಳ್ಳುತ್ತ ಹೋದರು.  


ಸಮ್ಮೇಳನದ ಹೊರಗೆ, ಏನು ಬೇಕು ಅಂದ್ರೆ ಅದು ಸಿಕ್ತಾ ಇತ್ತು.  ಕನ್ನಡ ಫಲಕಗಳು, ಶಾಲುಗಳು, ಟೋಪಿಗಳು ಎಲ್ಲೆಲ್ಲೂ ಕನ್ನಡಮಯ ಆಗಿತ್ತು.  ದೇವಸ್ಥಾನದಲ್ಲಿ ಮಂಗಳಾರತಿ ಸಮಯದಲ್ಲಿ ಜೋರಾಗಿ ಘಂಟೆ, ಶಂಖನಾದ ಮಾಡುತ್ತಾರೆ, ಯಾಕೆ ಅಂದ್ರೆ, ಜನಗಳಿಗೆ ಗೊತ್ತಾಗಬೇಕು ಅಂತ.  ಅದೇ ರೀತಿ ಇದು ಕೂಡ.  

ಇಗೋ ಕನ್ನಡದ ದಾದಾ, ಹಿರಿಯಜ್ಜ, ಶ್ರೀಯುತ ಜಿ. ವಿ. ಅಲಂಕರಿಸಿದ ಈ ಸಮ್ಮೇಳನ ೭೭ ಸಮ್ಮೇಳನದ ರಾಜ ಅಂತ ಹೇಳಬಹುದು.

ಈ ಜಾತ್ರೆಯಲ್ಲಿ ತಿಂಡಿ ತಿನಿಸುಗಳ ಅಬ್ಬರವಿರಲಿಲ್ಲ, ಆದರು ಜನರು ಬಂದು ಸೇರಿ, ನಲಿದರು.  ಇದು ಬೆಂಗಳೂರಿನ ಜನತೆ ಬರಿ ತಿನ್ನ್ನೋಕೆ ಮಾತ್ರ ಬರ್ತಾರೆ ಅನ್ನುವ ಒಂದು ಸುಳ್ಳು ಸತ್ಯವನ್ನೂ ಸುಳ್ಳು ಮಾಡಿತು.

 ಎಲ್ಲ ಹಿರಿ, ಕಿರಿ ಕವಿಗಳು, ಸಾಹಿತಿಗಳ ಹೆಸರು, ಶಿಕ್ಷಣ ತಜ್ಞರ, ನಾಟಕಕಾರರ, ಪ್ರಬುದ್ದ ರಾಜಕಾರಣಿಗಳ ಹೆಸರನ್ನು ಪ್ರವೇಶ ದ್ವಾರಗಳಿಗೆ ಇಡಲಾಗಿತ್ತು.  ಇಲ್ಲಿ ಯಾರು ಮರೆಯಾಗಿಲ್ಲ, ಎಲ್ಲರು ನಮ್ಮ ಜೊತೆಯಲ್ಲಿಯೇ ಇದ್ದಾರೆ ಎನ್ನುವ ಅಮೂಲ್ಯ ಸಂದೇಶವನ್ನು ತೋರುತಿತ್ತು.

ಅಣ್ಣಾವ್ರನ್ನು ನೆನೆಯದ, ಅಥವಾ ಅಣ್ಣಾವ್ರ ಹೆಸರಿಸದ ಕನ್ನಡ ಕಾರ್ಯಕ್ರಮ ಸಾಧ್ಯವೇ ಇಲ್ಲ ಎನ್ನುವ ಹಾಗೆ ಇತ್ತು.  ಆಟೋಗಳ ಮೇಲೆ ಭಾವಚಿತ್ರ ರಾರಾಜಿಸುತಿತ್ತು.  


ಒಂದಂತು ಅನಿಸಿತು, ಕನ್ನಡದ ಏಳಿಗೆಗೆ ಈ ತರಹದ ಸಂಭ್ರಮವಿರುವ ಸಮ್ಮೇಳನ ಅವಾಗ ಅವಾಗ ಆಗುತಿದ್ದರೆ, ಕುವೆಂಪು ಹೇಳಿದಂತೆ ಡಿಂಡಿಮ ಬಾರಿಸುತ್ತ ಇರಬಹುದು.  ನಮ್ಮ ತಾಯಿಯ ಬಗ್ಗೆ ನಾವೇ ಹೆಮ್ಮೆ ಪಡದೆ ಹೋದರೆ ಇನ್ನ್ಯಾರು ಮಾಡ್ತಾರೆ
https://picasaweb.google.com/srmanjun/KannadaMela#



Monday, February 7, 2011

ಪ್ರಪಂಚದಲ್ಲಿ ಅತಿ ತೆಳ್ಳಗೆ ಇರುವ ವಸ್ತು ಯಾವುದು - ಸವಿತಾ

ವಿಶ್ವಾಮಿತ್ರ : ರಾಜ ಸತ್ಯಹರಿಶ್ಚಂದ್ರ, ಪ್ರಪಂಚದಲ್ಲಿ ನೀನು ತುಂಬಾ ಸತ್ಯವಂತ ಎಂದು ಬಿರುದು ಇದೆ... ಅದನ್ನು ನಾನು ಪರೀಕ್ಷೆಮಾಡಬೇಕು

ಸತ್ಯಹರಿಶ್ಚಂದ್ರ : ನಮಸ್ಕಾರ ಮುನಿಶ್ರೇಷ್ಟರೆ..ಹೇಳಿ...ನಿಮ್ಮ ಪರೀಕ್ಷೆಗೆ ನಾನು 
ಸಿದ್ದ

ವಿಶ್ವಾಮಿತ್ರ : ಪ್ರಪಂಚದಲ್ಲಿ ಅತಿ ತೆಳ್ಳಗೆ ಇರುವ ವಸ್ತು ಯಾವುದು

ಸತ್ಯಹರಿಶ್ಚಂದ್ರ : ಶ್ರೀಕಾಂತನ ವಲ್ಲಭೆ , ಪ್ರಾಣವಲ್ಲಭೆ, 

ವಿಶ್ವಾಮಿತ್ರ : ರಾಜ, ಏನಾಯಿತು ನಿನ್ನ ಸತ್ಯ-ಸಂಧತೆ, ನಿನ್ನ ಉತ್ತರ ನನಗೆ 
ರಿ ಅನ್ನಿಸಲಿಲ್ಲ

ಸತ್ಯಹರಿಶ್ಚಂದ್ರ :ಮುನಿ ಪುಂಗವ, ಸವಿತಾ, ಸೂರ್ಯನ ಬೆಳಕಿಗಿಂಥಲೂ  ಸಣ್ಣ...ಬೆಂಗಳೂರಿನಂಥ ಮಹಾನಗರದಲ್ಲಿ, ಆರಕ್ಷಕನು ಹಣ ತೆಗೆದುಕೊಳ್ಳುವ ಬದಲು, ಹಣವನ್ನೇ ಕೊಟ್ಟಂಥಹ ಘಟನೆ ಇದೆ..ಹಿಂಗಾಗಿ..ಶ್ರೀಮತಿ ಸವಿತಾ ಶ್ರೀಕಾಂತ್ ಪ್ರಪಂಚದಲ್ಲಿ  ಅತಿ ತೆಳು, ಸಣ್ಣ, ಹಂಚಿ ಕಡ್ಡಿ ತರಹ ಇರುವ ವಸ್ತು,ಮಾನವಳು, ಜೀವ ಸೃಷ್ಟಿ....

ವಿಶ್ವಾಮಿತ್ರ : ತಿಳಿಯಿತು, ತಿಳಿಯಿತು...ನೀನು ಸುಳ್ಳು ಹೇಳುವುದು, ಸವಿತಾ ದಪ್ಪ 
ಆಗುವುದು, ಎರಡು ಅಸಂಭವ....ನಾನು ಸವಿತಳಿಗೆ ಆರೋಗ್ಯಪೂರ್ಣ, ಅಭಿವೃದ್ಧಿಪೂರ್ಣ, ಸಂತೋಷಪೂರ್ಣ ಶುಭಘಳಿಗೆ ಹಾಗು ಸಂವತ್ಸರಗಳನ್ನು ನನ್ನ ತಪಸ್ಸು ಮತ್ತು  ಶಕ್ತಿ ಧಾರೆ ಎರೆಯುತ್ತಿದ್ದೇನೆ.....ಕೊರವಂಗ ಕುಟುಂಬದ ಪರವಾಗಿ 
ಅವಳ ಜನ್ಮ ಶುಭದಿನದ ಶುಭಾಶಯ ಕೋರುತ್ತೇನೆ ಹಾಗು ಹಾರೈಸುತ್ತೇನೆ.




Wednesday, February 2, 2011

ಭ್ರಾತ್ರುಸ್ರೀ ಮತ್ತು ನಾದಿನಿಶ್ರೀ ಯವರ ವಿವಾಹ ಜೀವನದ ಶುಭ ನೆನಪುಗಳು ಮತ್ತು ಹಾರೈಕೆಗಳು

ವಿಶ್ವರೂಪ ನೋಡಿದ ಅರ್ಜುನ ಸ್ವಲ್ಪ ಘಳಿಗೆ ಮಂಕಾಗಿ ಹೋಗಿಬಿಟ್ಟ...

ಕೃಷ್ಣ ಕೇಳಿದ ಯಾಕೆ ಪಾರ್ಥ ಏನಾಯಿತು...ಯಾಕೆ ಹೀಗೆ ಕುಳಿತುಬಿಟ್ಟೆ

ಪರಮಾತ್ಮ ನಿನ್ನ ವಿಶ್ವರೂಪ ನೋಡಿದ ಮೇಲೆ ನನಗೆ ಒಂದು ಸಂದೇಹ.....

ನಿನ್ನಲ್ಲಿ ಎಲ್ಲವು, ಎಲ್ಲರು ಸೇರಿ ಹೋಗಿದ್ದಾರೆ...ಹಾಗೆಯೇ ಮನುಕುಲ ಸಂಕುಲದಲ್ಲಿ ಹೀಗೂ ಉಂಟೆ ಅಂತ TV9 ನಾರಾಯಣಸ್ವಾಮಿ ಕೇಳ್ತಾ ಇದ್ದಾರೆ...ಇದಕ್ಕೆ ಏನು ಹೇಳಲಿ ಅಂತ

ಕೃಷ್ಣ ನಾರಾಯಣಸ್ವಾಮಿಗೆ ಕರೆ ಮಾಡಿ, ನಾಣಿ ವಿಶ್ವರೂಪ ಸದ್ಯಕ್ಕೆ ಬೇಡ....ರಜನಿರೂಪ ನೋಡಿ ಬಾ ಅಂತ....

ಪಾರ್ಥನಿಗೆ ಕಸಿವಿಸಿ ಆಯಿತು...ಇದೇನಪ್ಪ ಹೊಸ ವಿಷ್ಯ, ರಜನಿರೂಪ ಅಂತ...

ಕೃಷ್ಣ ಹೇಳ್ತಾನೆ...ರಜನಿರೂಪ ಕೂಡ ವಿಶ್ವರೂಪದ ಹಾಗೆ..ಎಲ್ಲ ವಿಷಯವು ಎಲ್ಲರ ಮಾಹಿತಿಯು ಸಿಗುತ್ತೆ...ಯಾಕೆಂದರೆ...ಅವರ ಪುತ್ರ ರತ್ನ ನಮ್ಮ ಭಾರತ ದೇಶದ ಆದಿ ಪುರುಷನ ಹೆಸರೇ ಇದೆ...

ಹಾಗಾಗಿ ರಜನೀಶ + ರೂಪ = ರಜನಿರೂಪ ಅಂದ್ರೆ ಭರತ್ ಆಗುತ್ತೆ...

ಈದಿನ ಅವರ ವೈವಾಹಿಕ ಜೀವನದ ಮಹೋತ್ಸವ ಅವರಿಗೆ ಶುಭಾಶಯ ಹೇಳೋಕೆ ನಾವು ಖುಶಿಪದುತ್ತೇವೆ

ನೀವು ನಮ್ಮಂತೆ ಆಗಬೇಕೆ....ಹಾಗಿದ್ದರೆ ವೀಕ್ಷಿಸಿ ಹಿಂಗೆ ಉಂಟೋ.....