Thursday, July 28, 2011

ನನ್ನ ಸೋದರತ್ತೆ (ನನ್ನ ಅಪ್ಪನ ಅಕ್ಕ) ಭೌತಿಕ ದೇಹವನ್ನು ಬಿಟ್ಟು ಹೊರಟರು

ನನ್ನ ಸೋದರತ್ತೆ (ನನ್ನ ಅಪ್ಪನ ಅಕ್ಕ) ಸುಮಾರು ೮೫ ವಸಂತಗಳನ್ನು ಕಂಡ ನಮ್ಮ ಕೋರವಂಗಲ ಪರಂಪರೆಯ ಹಿರಿಯ ಚೇತನ ಭೌತಿಕ ದೇಹವನ್ನು ಬಿಟ್ಟು ಹೊರಟರು.  ಆ ನೆನಪಿನಲ್ಲಿ ಒಂದು ಸಣ್ಣ ಬರಹ..ಸೋದರತ್ತೆಯ ಅಪ್ಪ ಅಮ್ಮ (ನನ್ನ ಅಜ್ಜ ಅಜ್ಜಿ) ಈ ಸಂಧರ್ಭದಲ್ಲಿ ಆಡಿರಬಹುದಾದ ಮಾತುಗಳು ನನ್ನ ಕೂಸು ಕಲ್ಪನೆಯಲ್ಲಿ

ಅಜ್ಜಿ : ಏನ್ರಿ...ವಿಷಯ ತಿಳಿಯಿತ...


ಅಜ್ಜಯ್ಯ: ಹೌದು..ಗೊತ್ತಾಯಿತು...ನಮ್ಮ ಗೌರಿ ನಮ್ಮ ಹತ್ತಿರ ಬರ್ತಾ ಇದ್ದಾಳಂತೆ...

ಅಜ್ಜಿ: ಒಂದು ತರಹ ಬೇಜಾರು..ನಮ್ಮ ಕುಟುಂಬದ ಮೊದಲ ಚೇತನ ತನ್ನ
ಕುಟುಂಬವನ್ನೆಲ್ಲ ಬಿಟ್ಟು ನಮ್ಮ ಬಳಿ ಬರುವುದು ಮನಸಿಗೆ ಕಷ್ಟಕರವಾದ ವಿಷ್ಯ..

ಅಜ್ಜಯ್ಯ: ಹಂಗಲ್ಲ...ನಮ್ಮ ಜೀವನವೇ ಹಾಗೆ ಪುನರಪಿ ಜನನಂ, ಪುನರಪಿ ಮರಣಂ...ಇದುವೇ ಜೀವನ ಚಕ್ರ...

 
ಅಜ್ಜಿ: ದೇವರಲ್ಲಿ ಪ್ರಾರ್ಥನೆ ಮಾಡೋಣ..ಗೌರಿಯ ಆತ್ಮವು ಯಾವುದೇ ದುಃಖ, ದುಮ್ಮಾನಗಲಿಲ್ಲದೆ ಸ್ವರ್ಗಾರೋಹಣ ಮಾಡಲಿ


ಅಜ್ಜಯ್ಯ: ಮಗಳೇ ನಿನ್ನ ತುಂಬು ಜೀವನದಲ್ಲಿ ಸಾಕಷ್ಟು ನೋವು ನಲಿವುಗಳು ಇದ್ದರು...ನೀನು ಎಲ್ಲರಿಗು ಮಾರ್ಗದರ್ಶಿಯಾಗಿದ್ದೆ...ನಿನ್ನ ಆತ್ಮಕ್ಕೆ ನೆಮ್ಮದಿ

ಶಾಂತಿ ಕೊಡಲಿ ಎಂದು ಭಗವಂತನಲ್ಲಿ ಕೋರಿಕೊಳ್ಳುತ್ತೇವೆ

ಪುನರಪಿ ಜನನಂ, ಪುನರಪಿ ಮರಣಂ

No comments:

Post a Comment