Tuesday, May 22, 2012

ನಮ್ಮ ತಂದೆ-ತಾಯಿಗೆ ವಿವಾಹ ದಿನದ ಶುಭಾಶಯಗಳು (23.05.1960)

"ಮಂಗಳದ ಈ ಸುದಿನ ಮಧುರವಾಗಲಿ..ನಿಮ್ಮೊಲುಮೆ ಈ ಮನೆಯ ನಂದಾ ದೀಪವಾಗಲಿ.."

ಮಕ್ಕಳ ಮದುವೆಯನ್ನ  ನೋಡುವ ಭಾಗ್ಯ ಮಾತಾ-ಪಿತೃಗಳಿಗೆ ಇರುತ್ತೆ..

ಮಕ್ಕಳಿಗೆ ತಂದೆ-ತಾಯಿಯರ ಮದುವೆ ನೋಡುವ ಭಾಗ್ಯ ಮಾತಾ-ಪಿತೃಗಳ  ೬೦,೭೦, ಎಂಭತ್ತು ವರ್ಷಗಳ ಶಾಂತಿವ್ರತದಲ್ಲಿ ಸಿಗುತ್ತದೆ..ಅಂತಹ ಭಾಗ್ಯವನ್ನ ಕರುಣಿಸಿದ ನಿಮಗೆ ನಾವು ಶಿರ-ಮನ ಬಾಗಿ ವಂದಿಸುವೆವು..

ನಮ್ಮ ಪೂಜ್ಯ ಮಾತಾ ಪಿತೃಗಳು ನಮ್ಮ ಜನನಕ್ಕೆ ಕಾರಣವಾದ ವಿವಾಹ ಮಹೋತ್ಸವದ ದಿನ ಇಂದಿಗೆ ೫೨ ವರುಷಗಳ ಹಿಂದೆ ನಡೆದಿತ್ತು..

ಐವತ್ತೊಂದು ವರುಷ  ಸುಖ ಸಂಸಾರ ಮಾಡಿ, ನಲಿದು ನಮ್ಮ ಏಳಿಗೆಗಾಗಿ ಶ್ರಮಿಸಿದ,  ಮನಸಿಗೆ ಹರುಷ ತಂದ ನಮ್ಮ ಮಾತಾ ಪಿತೃಗಳ ಸುವರ್ಣ ಸಂಸಾರವನ್ನ ಕಣ್ಣಾರೆ ಕಂಡ ನಾವೇ ಪುಣ್ಯವಂತರು...

ಎಲ್ಲರು ಹೇಳುತ್ತಾರೆ..ನಮ್ಮ ಪರಮ ಪೂಜ್ಯ ಮಾತಾ ಪಿತೃಗಳು ಪುಣ್ಯ ಮಾಡಿದ್ದಾರೆ ಅಂತ..ಆದ್ರೆ ಅವರ ಮಕ್ಕಳಾಗಲು ನಾವು ಪುಣ್ಯ ಮಾಡಿದೇವೆ..

ನಮ್ಮ ತಂದೆ-ತಾಯಿಗೆ ವಿವಾಹ ದಿನದ ಶುಭಾಶಯಗಳು....

ಎಲ್ಲರನ್ನು ಸದಾಕಾಲ ನೆನೆಯುವ, ಹರಸುವ ಗಗನದಲ್ಲಿ ತಾರೆಯಾಗಿರುವ "ಅಣ್ಣ" ನಮ್ಮನ್ನು, ಮನೆಯನ್ನು ಮನೆತನವನ್ನು ಹರಸಿ, ಬೆಳೆಸಿ..

ನಿಮ್ಮ ಹಾರೈಕೆ, ಆಶೀರ್ವಾದ ನಮಗೆ ಶ್ರೀ ರಕ್ಷೆ...ಅಮ್ಮನ ಖುಷಿಯಲ್ಲಿ, ಸಂತಸದಲ್ಲಿ  ನಿಮ್ಮನ್ನ ಕಾಣುತ್ತೇವೆ...ನೀವು ಸದಾ ನಮ್ಮ ಜೊತೆಯಲ್ಲಿ ಇರುತ್ತೀರ..ಇರುವಿರಿ...

ಇಂತಿ ನಿಮ್ಮ "ಅನುಗ್ರಹ" ಇರುವ ಸದನದ ಕುಡಿಗಳು 

No comments:

Post a Comment