Sunday, August 26, 2012

ಐದು ಮುತ್ತುಗಳು...ಆಯ್ದುಕೊಂಡು ಹೋಗೋಣ ಬನ್ನಿ.. - Part II

ಮೊದಲನೇ ಅಂಕ...ಪರದೆಯ ಹಿಂದೆ...

ಒಂದು ಕುಟುಂಬದಲ್ಲಿ ಎಷ್ಟು ಸಹಾಬಾಳ್ವೆ ಇರಬಹುದು ಇರಬೇಕು..ಇದೆಲ್ಲ ಯೋಚನೆ ಮಾಡುವುದೇ ಅಲ್ಲ..ಬನ್ನಿ ಒಮ್ಮೆ ಬ್ಲಾಗ್ ಲೋಕಕ್ಕೆ...ದುಮುಕಿ ಒಂದು ಅಲೆಯ ಜೊತೆ ಈ ಕಡಲಿಗೆ..ಸಿಗುವ ಮಜವೇ ಬೇರೆ..

ಬನ್ನಿ..ಮುತ್ತು ಆಯ್ದುಕೊಳ್ಳುವ ಈ ಸಂಭ್ರಮದ ಅಭೂತಪೂರ್ವ ಕ್ಷಣಗಳಿಂದ.....
ಅಂದದ ಸಭಾಂಗಣ
ಜೊತೆ ಜೊತೆಯಲ್ಲಿ ಹೆಜ್ಜೆ ಹಾಕಿ ನಲಿಯುವ ಸಂಭ್ರಮ..
ಜೊತೆಯಲಿ ಜೊತೆ ಜೊತೆಯಲಿ
ಹೆಣ್ಣನ್ನು ಸಿಂಗರಿಸಿ...ಮಂಟಪಕ್ಕೆ ಕರೆತರುವ ದೃಶ್ಯ...ಬಹು ಸುಂದರ...
ಸೋದರಮಾವಯ್ಯ...ಕರೆ ತನ್ನಿರಯ್ಯ ಧಾರೆಗೆ ವಧುವನ್ನು...

ಅಪ್ಪಿಕೋ ಚಳುವಳಿಯ ಭಾವುಕ ಕ್ಷಣಗಳು..ತಮ್ಮ ಗೆಳೆಯರನ್ನ ಭೇಟಿ ನೀಡಿದ ಮಧುರ ಕ್ಷಣಗಳು


ನಾವೆಲ್ಲಾ ಇರುವಾಗ ಸಭಾಂಗಣ ತುಂಬಲು ಸಾಹಸ ಪಡಬೇಕೆ..ನಾವೇ ಗೆಲುವು..ಗೆಲುವೆ ನಾವು...
ಯೆಡಿ- ಬಡಿ ಊರಪ್ಪ...

ಬ್ಯಾಡ್ರಿ....ಬದರಿ...ಬನ್ನಿ ಇತ್ಲಾಗೆ...ನೀವಿಲ್ಲದೆ ಜನ ಬರರು....

ಪುಟಾಣಿಗಳು ಸಂಭ್ರಮದಿಂದ ನಲಿದಾಡಿದ ಆ ಕ್ಷಣಗಳು
ಮುದ್ದು ಮರಿ...

ಶೀತಲ್ ಗಿಂತ ಇರುವುದೇ ತಣ್ಣಗೆ
ಮಧುರವಾದ ಘಳಿಗೆಗಳಿಗೆ ಫೋಟೋ ಬೇಡವೇ ನಾನಿದ್ದೇನೆ....
ಬಾಲು ಸರ್..ಅವರ ತುಂಟು ಕಣ್ಣಿನ ಜೊತೆ...
ಕೆಲಸದ ಒತ್ತಡದ ನಡುವೆ ಕೂಡ ಈ ಮಧುರ ಸಂಗಮಕ್ಕೆ ಸಾಕ್ಷಿಯಾದವರು

ಪ್ರೇಕ್ಷಕರಿಂದ..ಮೊರೆತ ಕೇಳುತಿತ್ತು...ಪುಸ್ತಕದ ಬಿಡುಗಡೆ ಕ್ಷಣ ಹತ್ತಿರ ಬಂತು...
ಸಭಿಕರು...ಬ್ಲಾಗಿಗರು...ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ..
ಪುಸ್ತಕಗಳ ಸರದಾರರು ಸಭೆಯ ಮುಖ್ಯ ಅತಿಥಿಗಳ ಜೊತೆಯಲ್ಲಿ ನಿಂತರು...
ಲೇಖಕರು, ಅತಿಥಿಗಳು.. ..ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ..        
ಒಂದೊಂದಾಗಿ ಪುಸ್ತಕಗಳ ಪದರ ಬಿಚ್ಚುತ್ತಾ...ಭಾವನೆಗಳನ್ನ ಹರವಿ ಹಾಕಲು ಶುರು ಮಾಡಿದರು...ಎಲ್ಲ ಪುಸ್ತಕಗಳು ಲೋಕಾರ್ಪಣೆಯಾಯಿತು..
ಲೇಖಕರು, ಅತಿಥಿಗಳು.. ..ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ..       
ತಮ್ಮ ತಮ್ಮ ಅನಿಸಿಕೆಗಳು, ಭಾವನೆಗಳು, ಅಂತರಂಗದ ಅಭಿಮಾನಗಳು ಬುಗ್ಗೆಯಾಗಿ ಹರಿಯತೊಡಗಿತು...
ಸಾರ್ಥಕ ಕ್ಷಣಗಳಿಗೆ ಕಾರಣವಾಗಿದ್ದು ನೂರಾರು ಸಾವಿರಾರು ಕಣ್ಣುಗಳು..
ಸಭಿಕರು...ಬ್ಲಾಗಿಗರು...ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ..

ಸಭಿಕರು...ಬ್ಲಾಗಿಗರು...ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ..
ಇಂತಹ ಒಂದು ಅಮೋಘ ಕ್ಷಣಗಳಿಗೆ ಕಾರಣವಾದ ಸಭಾಂಗಣ ಖುಷಿಯಿಂದ ಆನಂದಭಾಷ್ಪ ಸುರಿಸಿತು...
ಧನ್ಯ ಬ್ಲಾಗಿಗರ ಲೋಕ..ಧನ್ಯ ಕವಿಗಳ ನಾಕ...ಇದುವೇ ಅಲ್ಲವೇ ಸುಂದರ ಜಗತ್ತು...
ಗೆಳೆಯರೇ ಮತ್ತೆ ಇನ್ನೊಂದು ಇಂತಹ ಕ್ಷಣಗಳಿಗೆ ಸಾಕ್ಷಿಯಾಗಲು ಮತ್ತೆ ಕಾಯುತ್ತೇನೆ..
ಹೋಗಿ ಬನ್ನಿ ಎಂದಿತು...ವಾಡಿಯಾ ಸಭಾಂಗಣ...
ಆನಂದ ಭಾಷ್ಪದೊಂದಿಗೆ... ವಾಡಿಯಾ ಸಭಾಂಗಣ.....

8 comments:

  1. ನಿಜವಾಗಲೂ ಹೇಳ ಬೇಕಾದರೆ, ಮನಸ್ಸು ಯಾಕೋ ಮರಗಟ್ಟಿ ಹೋಗಿತ್ತು. ಈ ಐದು ಪುಸ್ತಕಗಳ ಬಿಡುಗಡೆ ಸಮಾರಂಭ ಮತ್ತು ಅಗಣಿತ ಬ್ಲಾಗ್ ದೇವಾನು ದೇವತೆಗಳ ದರ್ಶನದಿಂದ ಮನಸ್ಸು ಅರಳಿತು.

    ನೀವು ಬರುವುದಿಲ್ಲ ಎನ್ನುವ ನೋವನ್ನು, ಸ್ವಲ್ಪ ಹೊತ್ತಾದರೂ ಇದ್ದು ನಮ್ಮನ್ನು ಖುಷಿಪಡಿಸಿದ ನಿಮ್ಮ ಪ್ರೀತಿಗೆ ಶರಣು.

    ನಿಮ್ಮ ಮಗಳು ಬಂಗಾರ.

    ReplyDelete
  2. ಶ್ರೀಕಾಂತ್ ಅವ್ರೆ,

    ಕಾರ್ಯಕ್ರಮ ತುಂಬಾನೇ ಚೆನ್ನಾಗಿತ್ತು...ಬ್ಲಾಗ್ ಮಿತ್ರರನ್ನೆಲ್ಲಾ ಒಂದೇ ಕಡೆ ನೋಡಿ ಸಂತಸವಾಯಿತು....ನಿಮ್ಮ ಫೋಟೋಗಳು ಮತ್ತೊಮ್ಮೆ 'ವಾಡಿಯ' ಕ್ಕೆ ನಮ್ಮನ್ನು ಕರೆದೊಯ್ದವು...ಧನ್ಯವಾದಗಳು...

    ReplyDelete
  3. ಒಡನಾಟ, ಪಿಸು ಮಾತುಗಳು, ಹರಟೆ, ಇವೆಲ್ಲ ಮನಸನ್ನು ಉಲ್ಲಾಸದಿಂದ ಇಡುತ್ತದೆ..ಇಂತಹ ಕಾರ್ಯಕ್ರಮ ಒಂದು ತರಹ ಶಕ್ತಿವರ್ಧಕ ಇದ್ದ ಹಾಗೆ...ಮತ್ತೆ ನಾವು ಪುಟಿದೇಳಲು ಸಹಾಯ ಮಾಡುತ್ತದೆ..ಧನ್ಯವಾದಗಳು ಬದರಿ ಸರ್...

    ReplyDelete
  4. ಎಸ್.ಪಿ..ನಿನ್ನ ಅಭಿಮಾನವೇ ನಮಗೆ ಶ್ರೀ ರಕ್ಷೆ...

    ReplyDelete
  5. ಅಶೋಕ್ ಸರ್..ತುಂಬಾ ಅಭಾರಿ ನಿಮಗೆ..ನನ್ನ ಲೋಕಕ್ಕೆ ಬಂದು ಓದಿ ನಲಿದು ಹರಿಸಿದ್ದೀರಿ..ಧನ್ಯವಾದಗಳು..

    ReplyDelete
  6. ಸರ್,
    ತುಂಬಾ ದಿನಗಳ ನಂತರ ಕೆಲಸದ ಒತ್ತಡಗಳನ್ನೆಲ್ಲಾ ಮರೆತು ಪೂರ್ತಿ ಕಾರ್ಯಕ್ರಮವನ್ನು enjoy ಮಾಡಿದೆ...ತುಂಬಾ ಖುಷಿಯಾಯ್ತು...

    ReplyDelete
  7. ಧನ್ಯವಾದಗಳು ಶಿವೂ ಸರ್..ನಿಮ್ಮ ಅಭಿಮಾನ..ನಮಗೆ ಶ್ರೀರಕ್ಷೆ..

    ReplyDelete